ಜೇಮ್ಸ್ ಮ್ಯಾಕ್ಸ್‍ವೆಲ್ ಆಂಡರ್ಸನ್ (ಡಿಸೆಂಬರ್ 15, 1888 – ಫೆಬ್ರವರಿ 28, 1959).ಅಮೆರಿಕದ ನಾಟಕಕಾರ,ಬರಹಗಾರ,ಕವಿ. == ಆರಂಭಿಕ ಜೀವನ == ಮ್ಯಾಕ್ಸ್‌ವೆಲ್ ಆಂಡರ್ಸನ್ ಅಮೆರಿಕದ ಪೆನ್ಸಿಲ್‍ವೇನಿಯಾದಲ್ಲಿ ಜನಿಸಿದನು.೧೯೧೧ರಲ್ಲಿ ನಾರ್ಥ್ ಡಕೋಟಾ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದನು.ಅನಂತರ ಹೈಸ್ಕೂಲಿನ ಪ್ರಾಧ್ಯಾಪಕನಾಗಿ ವೃತ್ತಿ ಜೀವನ ಆರಂಬಿಸಿದನು. == ಸಾಹಿತ್ಯ ರಚನೆ == ಮ್ಯಾಕ್ಸ್‌ವೆಲ್ ಆಂಡರ್ಸನ್ ಬಹುಮುಖ ಪ್ರತಿಭೆ ಹೊಂದಿದ್ದನು. ಪತ್ರಕರ್ತನಾಗಿದ್ದರೂ ನಾಟಕಗಳಲ್ಲಿ ಇವನ ಪ್ರತಿಭೆ ಅನಾವರಣಗೊಂಡಿದೆ. ವಾಸ್ತವಿಕ ಗದ್ಯನಾಟಕಗಳು (ಉದಾ: ವಾಟ್‍ಪ್ರೈಸ್ ಗ್ಲೋರಿ), ಚಾರಿತ್ರಿಕ ಗದ್ಯನಾಟಕಗಳು (ಉದಾ: ಎಲಿಜûಬೆತ್ ದಿ ಕ್ವೀನ್) ಆಧುನಿಕ ಆವರಣವಿರುವ ಪದ್ಯನಾಟಕಗಳು (ಉದಾ: ವಿನ್ಟರ್‍ಸೆಟ್)-ಇವನ್ನು ರಚಿಸಿದ್ದಾನೆ. == ಬಾಹ್ಯ ಸಂಪರ್ಕಗಳು == ಮ್ಯಾಕ್ಸ್‌ವೆಲ್ ಆಂಡರ್ಸನ್ ಮ್ಯಾಕ್ಸ್‌ವೆಲ್ ಆಂಡರ್ಸನ್ ಐ ಎಮ್ ಡಿ ಬಿನಲ್ಲಿ